Indian Navy Recruitment 2026: 275 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ತಿಂಗಳಿಗೆ ₹1.20 ಲಕ್ಷ ವೇತನ!

Indian Navy Recruitment 2026

  • ಹುದ್ದೆ: ಶಾರ್ಟ್ ಸರ್ವಿಸ್ ಕಮಿಷನ್ (SSC) ಆಫೀಸರ್.
  • ಒಟ್ಟು ಹುದ್ದೆಗಳು: 275.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಜುಲೈ 2026.
  • ಅರ್ಹತೆ: ಕನಿಷ್ಠ 60% ಅಂಕಗಳೊಂದಿಗೆ BE/B.Tech ಅಥವಾ ಸಂಬಂಧಿತ ಸ್ನಾತಕೋತ್ತರ ಪದವಿ.
  • ಆಯ್ಕೆ ಪ್ರಕ್ರಿಯೆ: ಮೆರಿಟ್ ಆಧಾರಿತ ಶಾರ್ಟ್‌ಲಿಸ್ಟಿಂಗ್ ಮತ್ತು SSB ಸಂದರ್ಶನ (ಲಿಖಿತ ಪರೀಕ್ಷೆ ಇಲ್ಲ).
  • ಆರಂಭಿಕ ವೇತನ: ಅಂದಾಜು ₹1,20,000 ಪ್ರತಿ ತಿಂಗಳು (ಜೊತೆಗೆ ವಿಶೇಷ ಭತ್ಯೆಗಳು).
  • ತರಬೇತಿ ಸ್ಥಳ: ಇಂಡಿಯನ್ ನೇಪಲ್ ಅಕಾಡೆಮಿ (INA), ಎಳಿಮಲ, ಕೇರಳ.
  • ಅರ್ಹ ಅಭ್ಯರ್ಥಿಗಳು: ಅವಿವಾಹಿತ ಪುರುಷರು ಮತ್ತು ಮಹಿಳೆಯರು ಮಾತ್ರ.

ಭಾರತೀಯ ನೌಕಾಪಡೆಯಲ್ಲಿ ಆಫೀಸರ್ ಆಗಿ ದೇಶವನ್ನು ರಕ್ಷಿಸುವ ನಿಮ್ಮ ಕನಸು ನನಸಾಗುವ ಸಮಯ ಬಂದಿದೆ! ಭಾರತೀಯ ನೌಕಾಪಡೆಯು ಜೂನ್ 2027ರ ಬ್ಯಾಚ್‌ಗಾಗಿ (AT 27) ವಿವಿಧ ಶಾಖೆಗಳಲ್ಲಿ 275 ಶಾರ್ಟ್ ಸರ್ವಿಸ್ ಕಮಿಷನ್ (SSC) ಆಫೀಸರ್ ಹುದ್ದೆಗಳಿಗೆ Indian Navy Recruitment 2026 ಗೆ ಅರ್ಜಿ ಆಹ್ವಾನಿಸಿದೆ.

ಇದು ಇಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವೀಧರರಿಗೆ ಸಿಕ್ಕಿರುವ ಒಂದು ಸುವರ್ಣಾವಕಾಶ. ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇಲ್ಲಿದೆ.

Indian Navy Recruitment 2026 : ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 25 ಜೂನ್ 2026.
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 27 ಜುಲೈ 2026.
  • ತರಬೇತಿ ಆರಂಭ: ಜೂನ್ 2027 (ಇಂಡಿಯನ್ ನೇಪಲ್ ಅಕಾಡೆಮಿ – INA, ಎಳಿಮಲ, ಕೇರಳ).

ಪ್ರಮುಖ ಶಾಖೆಗಳು ಮತ್ತು ವಿದ್ಯಾರ್ಹತೆ:

ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಶಾಖೆಗಳಿಗೆ ಅರ್ಜಿ ಸಲ್ಲಿಸಬಹುದು:

  1. ಎಕ್ಸಿಕ್ಯೂಟಿವ್ ಬ್ರಾಂಚ್:
    • GS(X) / Hydro / Pilot / Observer / ATC: ಇವುಗಳಿಗೆ BE/B.Tech ಪದವಿ ಕಡ್ಡಾಯ. (ಪೈಲಟ್ ಮತ್ತು ಅಬ್ಸರ್ವರ್ ಹುದ್ದೆಗಳಿಗೆ 10 ಮತ್ತು 12ನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 60% ಅಂಕಗಳು ಅವಶ್ಯ).
    • Logistics: First Class BE/B.Tech ಅಥವಾ MBA/MCA/M.Sc (IT) ಅಥವಾ ಸಂಬಂಧಿತ ವಿಷಯಗಳಲ್ಲಿ PG ಡಿಪ್ಲೊಮಾ.
    • NAIC: ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್ ಮುಂತಾದ ಇಂಜಿನಿಯರಿಂಗ್ ವಿಭಾಗಗಳು.
  2. ಎಜುಕೇಶನ್ ಬ್ರಾಂಚ್ (18 ಹುದ್ದೆಗಳು):
    • ಗಣಿತ, ಭೌತಶಾಸ್ತ್ರ, ಇತಿಹಾಸ (M.A – 55% ಅಂಕಗಳು) ಮತ್ತು ವಿವಿಧ ಇಂಜಿನಿಯರಿಂಗ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರಿಗೆ ಅವಕಾಶ.
  3. ಟೆಕ್ನಿಕಲ್ ಬ್ರಾಂಚ್:
    • ಇಂಜಿನಿಯರಿಂಗ್ (GS), ಸಬ್‌ಮರೀನ್ ಟೆಕ್ನಿಕಲ್, ಎಲೆಕ್ಟ್ರಿಕಲ್ (GS) ಮತ್ತು ನೇಪಲ್ ಕನ್ಸ್‌ಟ್ರಕ್ಟರ್ ಹುದ್ದೆಗಳು. ಮೆರೈನ್, ಮೆಕ್ಯಾನಿಕಲ್, ಸಿವಿಲ್, ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ.

ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ನಿಯಮಗಳು : Indian Navy SSC Officer Vacancy

  • ಶಾರ್ಟ್‌ಲಿಸ್ಟಿಂಗ್: ಪದವಿಯ ಅಂಕಗಳ ಆಧಾರದ ಮೇಲೆ (BE/B.Tech ಅಭ್ಯರ್ಥಿಗಳಿಗೆ 5ನೇ ಸೆಮಿಸ್ಟರ್ ವರೆಗಿನ ಅಂಕಗಳು) ಶಾರ್ಟ್‌ಲಿಸ್ಟ್ ಮಾಡಿ SSB ಸಂದರ್ಶನಕ್ಕೆ ಕರೆಯಲಾಗುತ್ತದೆ.
  • SSB ಸಂದರ್ಶನ: ಅಭ್ಯರ್ಥಿಗಳಿಗೆ ಇಮೇಲ್/SMS ಮೂಲಕ ಮಾಹಿತಿ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಸಂದರ್ಶನದ ಕೇಂದ್ರ ಬದಲಾಯಿಸಲು ಅವಕಾಶವಿರುವುದಿಲ್ಲ.
  • ಬ್ಯಾಕ್‌ಲಾಗ್ ನಿಯಮ: ದಾಖಲೆ ಪರಿಶೀಲನೆ ಸಮಯದಲ್ಲಿ ಯಾವುದೇ ವಿಷಯದಲ್ಲಿ ಬ್ಯಾಕ್‌ಲಾಗ್ ಇದ್ದರೆ, ಅಭ್ಯರ್ಥಿಯನ್ನು ನೇರವಾಗಿ ತಿರಸ್ಕರಿಸಲಾಗುತ್ತದೆ.

Indian Navy Recruitment 2026 : ವೇತನ ಮತ್ತು ಸವಲತ್ತುಗಳು:

  • ಆರಂಭಿಕ ವೇತನ: ಸಬ್ ಲೆಫ್ಟಿನೆಂಟ್ ಹುದ್ದೆಯೊಂದಿಗೆ ತಿಂಗಳಿಗೆ ಅಂದಾಜು ₹1,20,000.
  • ವಿಶೇಷ ಭತ್ಯೆ: ಫ್ಲೈಯಿಂಗ್ ಅಥವಾ ಸಬ್‌ಮರೀನ್ ವಿಭಾಗಗಳಲ್ಲಿ ತರಬೇತಿಯ ನಂತರ ಹೆಚ್ಚುವರಿಯಾಗಿ ₹31,250 ಭತ್ಯೆ ಸಿಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ ? Indian Navy Application (ಹಂತ-ಹಂತದ ಮಾರ್ಗದರ್ಶಿ)

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಭಾರತೀಯ ನೌಕಾಪಡೆಯ ನೇಮಕಾತಿ ವೆಬ್‌ಸೈಟ್ joinindiannavy.gov.in ಅನ್ನು ತೆರೆಯಿರಿ.

2. ರಿಜಿಸ್ಟ್ರೇಷನ್ (Registration):

  • ವೆಬ್‌ಸೈಟ್‌ನಲ್ಲಿ ‘Register’ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿಯನ್ನು ಬಳಸಿ ನೋಂದಾಯಿಸಿಕೊಳ್ಳಿ.
  • ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ (ಇದು ಬಹಳ ಮುಖ್ಯ, ಏಕೆಂದರೆ ಎಲ್ಲಾ ಸಂದರ್ಶನದ ಮಾಹಿತಿ ಇದೇ ನಂಬರ್‌ಗೆ ಬರುತ್ತದೆ).

3. ಲಾಗಿನ್ (Login): ನೋಂದಣಿ ಪೂರ್ಣಗೊಂಡ ನಂತರ, ನಿಮ್ಮ ಇಮೇಲ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.

4. ಅರ್ಜಿ ಫಾರ್ಮ್ ಭರ್ತಿ ಮಾಡಿ:

  • ಡ್ಯಾಶ್‌ಬೋರ್ಡ್‌ನಲ್ಲಿ ‘Current Opportunities’ ವಿಭಾಗವನ್ನು ಆಯ್ಕೆ ಮಾಡಿ.
  • ಅಲ್ಲಿ ಕಾಣುವ “Short Service Commission (SSC) Officer – June 2027 (AT 27) Course” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅಂಕಗಳು (SSLC, PUC, Degree/PG ಅಂಕಗಳು) ಮತ್ತು ವಿಳಾಸದ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.

5. ದಾಖಲೆಗಳನ್ನು ಅಪ್‌ಲೋಡ್ ಮಾಡಿ:

  • ನಿಗದಿತ ಫಾರ್ಮ್ಯಾಟ್‌ನಲ್ಲಿ ನಿಮ್ಮ ಫೋಟೋ (Recent Passport Size) ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  • ನಿಮ್ಮ ಪದವಿ ಅಂಕಪಟ್ಟಿಗಳು (Marks sheets) ಮತ್ತು ಇತರೆ ಅಗತ್ಯ ಪ್ರಮಾಣಪತ್ರಗಳನ್ನು (NCC, CPL ಇತ್ಯಾದಿ ಇದ್ದರೆ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

6. ಪರಿಶೀಲನೆ ಮತ್ತು ಸಲ್ಲಿಕೆ:

  • ಸಲ್ಲಿಸುವ ಮುನ್ನ ಫಾರ್ಮ್ ಅನ್ನು ಮತ್ತೊಮ್ಮೆ ಚೆಕ್ ಮಾಡಿ (ಯಾವುದೇ ಸ್ಪೆಲ್ಲಿಂಗ್ ಮಿಸ್ಟೇಕ್ ಇರಬಾರದು).
  • ಎಲ್ಲವೂ ಸರಿಯಾಗಿದ್ದರೆ ‘Submit’ ಬಟನ್ ಕ್ಲಿಕ್ ಮಾಡಿ.

7. ಪ್ರಿಂಟೌಟ್ ತೆಗೆದುಕೊಳ್ಳಿ: ಅರ್ಜಿ ಸಲ್ಲಿಕೆಯಾದ ನಂತರ, ಅದರ ಒಂದು ಪ್ರಿಂಟೌಟ್ ಅಥವಾ PDF ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ. ಇದು ಮುಂದಿನ ಹಂತದ SSB ಸಂದರ್ಶನಕ್ಕೆ ಬಹಳ ಮುಖ್ಯ.

Official Notification pdf : Click Here

Official Website: Click Here

Apply Online : Click Here

SSB Interview Process 2026 ಗಮನಿಸಬೇಕಾದ ಪ್ರಮುಖ ವಿಷಯಗಳು:

  • ಅವಿವಾಹಿತ ಅಭ್ಯರ್ಥಿಗಳು ಮಾತ್ರ: ಈ ಹುದ್ದೆಗಳಿಗೆ ಕೇವಲ ಅವಿವಾಹಿತ ಪುರುಷ ಮತ್ತು ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
  • ಸಮ್ಮತಿಯ ನಿಯಮ: ತರಬೇತಿ ಸಮಯದಲ್ಲಿ ಮದುವೆಯಾದರೆ ಅಥವಾ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದರೆ, ಸರ್ಕಾರವು ತರಬೇತಿಗಾಗಿ ವೆಚ್ಚ ಮಾಡಿದ ಹಣವನ್ನು ಮರುಪಾವತಿಸಬೇಕಾಗುತ್ತದೆ.
  • ನಾರ್ಕೋಟಿಕ್ಸ್ ನಿಯಮ: ಮಾದಕ ವಸ್ತುಗಳ ಬಳಕೆಯ ವಿಷಯದಲ್ಲಿ ನೌಕಾಪಡೆ ಶೂನ್ಯ ಸಹಿಷ್ಣುತೆ (Zero Tolerance) ಹೊಂದಿದ್ದು, ನಿಯಮ ಉಲ್ಲಂಘಿಸಿದರೆ ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗುತ್ತದೆ.
  • ವಿಶೇಷ ಅವಕಾಶ: NCC ‘C’ ಪ್ರಮಾಣಪತ್ರ ಹೊಂದಿರುವವರಿಗೆ SSB ಶಾರ್ಟ್‌ಲಿಸ್ಟಿಂಗ್‌ನಲ್ಲಿ 5% ಅಂಕಗಳ ರಿಯಾಯಿತಿ ಸಿಗಲಿದೆ (ಕನಿಷ್ಠ ‘B’ ಗ್ರೇಡ್ ಇರಬೇಕು).
ಪ್ರಮುಖ ಸಲಹೆಗಳು:
  • ಕೊನೆಯ ದಿನಾಂಕ: ಜುಲೈ 27, 2026. ಸರ್ವರ್ ದಟ್ಟಣೆಯನ್ನು ತಪ್ಪಿಸಲು ಅಂತಿಮ ದಿನದವರೆಗೆ ಕಾಯಬೇಡಿ.
  • ಇಮೇಲ್ ಎಚ್ಚರ: ನಿಮ್ಮ ಇಮೇಲ್ ಮತ್ತು ಮೊಬೈಲ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ, ಏಕೆಂದರೆ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ SSB ಸಂದರ್ಶನದ ಮಾಹಿತಿಯನ್ನು ಇಮೇಲ್ ಮೂಲಕವೇ ಕಳುಹಿಸಲಾಗುತ್ತದೆ.
  • ಅಂಕಗಳ ನಮೂದು: ಪದವಿಯ ಅಂಕಗಳನ್ನು ನಮೂದಿಸುವಾಗ ತುಂಬಾ ಜಾಗರೂಕರಾಗಿರಿ, ಯಾಕೆಂದರೆ ಶಾರ್ಟ್‌ಲಿಸ್ಟಿಂಗ್ ಸಂಪೂರ್ಣವಾಗಿ ಅಂಕಗಳ ಆಧಾರದ ಮೇಲೆ ನಡೆಯುತ್ತದೆ.

ಹಕ್ಕುತ್ಯಾಗ : ಈ ಲೇಖನವು ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ.

Public Needs

Public Needs

ಜನಸಾಮಾನ್ಯರಿಗೆ ಉಪಯುಕ್ತ ಮಾಹಿತಿ ಒದಗಿಸುವ 'ಪಬ್ಲಿಕ್ ನೀಡ್ಸ್' ವೇದಿಕೆಯ ಪ್ರಮುಖ ಲೇಖಕರು ಹಾಗೂ ವರದಿಗಾರರು. AB (Avinash)ರವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (VTU) MCA ಪದವಿ ಪಡೆದಿರುವ ಇವರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ೫ ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಸಮಾಜಕ್ಕೆ ಅಗತ್ಯವಿರುವ ನಿಖರವಾದ ಹಾಗೂ ಮಹತ್ವದ ಮಾಹಿತಿಗಳನ್ನು ಡಿಜಿಟಲ್ ಮೂಲಕ ಜನರಿಗೆ ತಲುಪಿಸುವುದು ಇವರ ಪ್ರಮುಖ ಉದ್ದೇಶ.

Leave a Reply

Your email address will not be published. Required fields are marked *