ನಮಸ್ಕಾರ ಸ್ನೇಹಿತರೆ! (KEA Agriculture Officer) ಕೃಷಿ ಅಧಿಕಾರಿ ಪರೀಕ್ಷೆಗೆ ಓದುತ್ತಿರುವ ನಿಮಗೆಲ್ಲರಿಗೂ ಒಂದು ಮುಖ್ಯವಾದ ಅಪ್ಡೇಟ್ ಇಲ್ಲಿದೆ!
ಪ್ರಮುಖ ಮುಖ್ಯಾಂಶಗಳು :
- ಪರೀಕ್ಷೆ ಮುಂದೂಡಿಕೆ: RBI ಪರೀಕ್ಷೆಯ ಹಿನ್ನೆಲೆಯಲ್ಲಿ KEA ಕೃಷಿ ಅಧಿಕಾರಿ (AO & AAO) ಪರೀಕ್ಷಾ ದಿನಾಂಕ ಬದಲು.
- ಹೊಸ ದಿನಾಂಕಗಳು: ಕಡ್ಡಾಯ ಕನ್ನಡ: ಜುಲೈ 19 | ಕಲ್ಯಾಣ ಕರ್ನಾಟಕ ವೃಂದ: ಜುಲೈ 25 | ಉಳಿಕೆ ಮೂಲ ವೃಂದ: ಆಗಸ್ಟ್ 9.
- ನೆಗೆಟಿವ್ ಮಾರ್ಕಿಂಗ್: ತಪ್ಪು ಉತ್ತರಕ್ಕೆ ಹಾಗೂ ಕಡ್ಡಾಯವಾಗಿ 5ನೇ ಆಯ್ಕೆ (Option) ಶೇಡ್ ಮಾಡದಿದ್ದರೆ 0.25 ಅಂಕ ಕಡಿತ.
- ಹಾಜರಾತಿ ಸಮಯ: ಕಟ್ಟುನಿಟ್ಟಿನ ತಪಾಸಣೆ ಇರುವುದರಿಂದ ಪರೀಕ್ಷೆಗೂ 2 ಗಂಟೆ ಮುಂಚೆ ಕೇಂದ್ರದಲ್ಲಿ ಹಾಜರಿರಬೇಕು.
ಕೃಷಿ ಇಲಾಖೆಯ ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ಪರೀಕ್ಷೆಗಾಗಿ ಹಗಲಿರುಳು ಕಷ್ಟಪಟ್ಟು ಓದುತ್ತಿರುವ ಅಭ್ಯರ್ಥಿಗಳಿಗೆ KEA ಕಡೆಯಿಂದ ಒಂದು ರಿಲೀಫ್ ಸಿಕ್ಕಿದೆ. ಜುಲೈ 25 ಮತ್ತು 26 ರಂದು ನಡೆಯಬೇಕಿದ್ದ ಪರೀಕ್ಷೆಯ ದಿನಾಂಕಗಳು ಈಗ ಬದಲಾಗಿವೆ.
KEA Agriculture Officer ಪರೀಕ್ಷಾ ವೇಳಾಪಟ್ಟಿ ಬದಲಾವಣೆ ಯಾಕೆ ಆಯ್ತು ಅಂತೀರಾ?
ಜುಲೈ 26 ರಂದೇ RBI ಪರೀಕ್ಷೆ ಕೂಡ ಇದ್ದಿದ್ದರಿಂದ, ಸಾಕಷ್ಟು ಅಭ್ಯರ್ಥಿಗಳಿಗೆ ಒಂದೇ ದಿನ ಎರಡು ಪರೀಕ್ಷೆ ಅಟೆಂಡ್ ಮಾಡುವುದು ಕಷ್ಟವಾಗಿತ್ತು. ವಿದ್ಯಾರ್ಥಿಗಳ ಈ ಸಮಸ್ಯೆಯನ್ನು ಅರ್ಥಮಾಡಿಕೊಂಡು ಸ್ಪಂದಿಸಿರುವ KEA, ಪರೀಕ್ಷೆಯನ್ನು ಮುಂದೂಡಿ ಹೊಸ ಟೈಮ್‌ಟೇಬಲ್ ಬಿಟ್ಟಿದೆ. ರಿಲ್ಯಾಕ್ಸ್ ಆಗಿ, ಹೊಸ ವೇಳಾಪಟ್ಟಿಯನ್ನು ಒಮ್ಮೆ ನೋಡ್ಕೊಳ್ಳಿ:
KEA Agriculture Officer ಹೊಸ ಪರೀಕ್ಷಾ ವೇಳಾಪಟ್ಟಿ ಹೀಗಿದೆ:
1. ಕಡ್ಡಾಯ ಕನ್ನಡ ಪರೀಕ್ಷೆ (ಎಲ್ಲರಿಗೂ)
- ದಿನಾಂಕ : 19 ಜುಲೈ 2026 (ಭಾನುವಾರ)
- ಟೈಮ್: ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ
- ಗರಿಷ್ಟ ಅಂಕಗಳು: 150
2. ಕಲ್ಯಾಣ ಕರ್ನಾಟಕ (KK) ಭಾಗದ ಹುದ್ದೆಗಳಿಗೆ
- ದಿನಾಂಕ : 25 ಜುಲೈ 2026 (ಶನಿವಾರ)
- ಪತ್ರಿಕೆ-1 (ಸಾಮಾನ್ಯ ಜ್ಞಾನ): ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ
- ಪತ್ರಿಕೆ-2 (ನಿರ್ದಿಷ್ಟ ವಿಷಯ): ಮಧ್ಯಾಹ್ನ 02:30 ರಿಂದ ಸಂಜೆ 04:30 ರವರೆಗೆ
- ಗರಿಷ್ಟ ಅಂಕಗಳು: 300
3. ಉಳಿಕೆ ಮೂಲ ವೃಂದದ (RPC) ಹುದ್ದೆಗಳಿಗೆ
- ದಿನಾಂಕ : 09 ಆಗಸ್ಟ್ 2026 (ಭಾನುವಾರ)
- ಪತ್ರಿಕೆ-1 (ಸಾಮಾನ್ಯ ಜ್ಞಾನ): ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ
- ಪತ್ರಿಕೆ-2 (ನಿರ್ದಿಷ್ಟ ವಿಷಯ): ಮಧ್ಯಾಹ್ನ 02:30 ರಿಂದ ಸಂಜೆ 04:30 ರವರೆಗೆ.
- ಗರಿಷ್ಟ ಅಂಕಗಳು: 300
ಎಕ್ಸಾಮ್ ಹಾಲ್‌ಗೆ ಹೋಗುವ ಮುನ್ನ ಈ 3 ರೂಲ್ಸ್ ಮರೀಬೇಡಿ!
- ಸ್ವಲ್ಪ ಬೇಗನೆ ಹೋಗಿ: ಎಕ್ಸಾಮ್ ಶುರುವಾಗುವ ಸರಿಯಾಗಿ ಎರಡು ಗಂಟೆ ಮುಂಚೆನೆ ನೀವು ಸೆಂಟರ್‌ನಲ್ಲಿ ಇರಬೇಕು. ಯಾಕೆಂದರೆ, ಅಲ್ಲಿ ಭದ್ರತಾ ತಪಾಸಣೆ (Frisking) ಮತ್ತು ಕ್ಯಾಮೆರಾ ಮೂಲಕ ಮುಖಚಹರೆ ಪರಿಶೀಲನೆ ಇರುತ್ತೆ. ಲಾಸ್ಟ್ ಮಿನಿಟ್‌ನಲ್ಲಿ ಹೋಗಿ ಟೆನ್ಷನ್ ಮಾಡ್ಕೊಳ್ಳೋದು ಬೇಡ.
- ನೆಗೆಟಿವ್ ಮಾರ್ಕಿಂಗ್ ಇದೆ, ಹುಷಾರ್!: ಆನ್ಸರ್ ಪಕ್ಕಾ ಗೊತ್ತಿದ್ದರೆ ಮಾತ್ರ ಶೇಡ್ ಮಾಡಿ. ಪ್ರತಿ ತಪ್ಪು ಉತ್ತರಕ್ಕೂ 1/4 (ಅಂದರೆ 0.25) ಮಾರ್ಕ್ಸ್ ಕಟ್ ಆಗುತ್ತೆ. (ಒಂದು ಸಮಾಧಾನದ ವಿಷಯ ಅಂದ್ರೆ, ಕಡ್ಡಾಯ ಕನ್ನಡ ಪರೀಕ್ಷೆಗೆ ಯಾವುದೇ ನೆಗೆಟಿವ್ ಮಾರ್ಕಿಂಗ್ ಇರಲ್ಲ!).
- 5ನೇ ಆಪ್ಷನ್ ತುಂಬೋದು ಕಡ್ಡಾಯ: ಯಾವುದಾದರೂ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಅಂದ್ರೆ, ಹಾಗೇ ಖಾಲಿ ಬಿಟ್ಟು ಬರೋ ಹಾಗಿಲ್ಲ. OMR ಶೀಟ್‌ನಲ್ಲಿರುವ 5ನೇ ಆಪ್ಷನ್ ಅನ್ನು ಶೇಡ್ ಮಾಡಲೇಬೇಕು. ಇದಕ್ಕಾಗಿ ಎಕ್ಸಾಮ್ ಮುಗಿದ ಮೇಲೆ ಎಕ್ಸ್ಟ್ರಾ 5 ನಿಮಿಷ ಕೊಡ್ತಾರೆ. ಒಂದು ವೇಳೆ ನೀವು 5ನೇ ಆಪ್ಷನ್ ಶೇಡ್ ಮಾಡಿಲ್ಲ ಅಂದ್ರೆ, ಅದಕ್ಕೂ 0.25 ಮಾರ್ಕ್ಸ್ ಹೋಗುತ್ತೆ!
ಅಧಿಸೂಚನೆ : Click Here
ಪರೀಕ್ಷೆಗೆ ಓದಲು ಈಗ ಇನ್ನಷ್ಟು ಒಳ್ಳೆಯ ಸಮಯ ಸಿಕ್ಕಿದೆ, ಟೆನ್ಷನ್ ಇಲ್ಲದೆ ಧೈರ್ಯವಾಗಿ ಓದಿ. ಸಾರ್ವಜನಿಕ ಸೇವೆಗೆ ಸೇರಬೇಕೆಂಬ ನಿಮ್ಮ ಕನಸು ನನಸಾಗಲಿ. ನಿಮ್ಮ ಶ್ರಮಕ್ಕೆ ಖಂಡಿತ ಯಶಸ್ಸು ಸಿಗುತ್ತದೆ.
ಎಲ್ಲರಿಗೂ ಆಲ್ ದ ಬೆಸ್ಟ್! 👍
Also Read :
